ಬಂಟ್ವಾಳ: ಅತ್ಯಾಚಾರವಾಗಿದ್ದ ಯುವತಿ ಗರ್ಭಿಣಿ: ಆರೋಪಿಯ ಬಂಧನ
ಬಂಟ್ವಾಳ: ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡು ಯುವತಿಯೋರ್ವಳನ್ನು ಗರ್ಭವತಿಯನ್ನಾಗಿ ಮಾಡಿದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಅಮ್ಟಾಡಿ ನಿವಾಸಿ ವಿವಾಹಿತನಾಗಿರುವ ಗುರುಪ್ರಸಾದ್ ಬಂಧಿತ ಆರೋಪಿ.
ಈತನಿಂದ ಅನ್ಯಾಯಕ್ಕೊಳಗಾದ ಯುವತಿ ಎರಡು ದಿನಗಳ ಹಿಂದೆ ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಅಮ್ಟಾಡಿ ನಿವಾಸಿ ಗುರುಪ್ರಸಾದ್ ಎಂಬಾತ ಸಂಬಂಧಿ ಯುವತಿಗೆ ಕಳೆದ ಒಂದು ವರ್ಷಗಳಿಂದ ಎರಡು ಬಾರಿ ಇಚ್ಚೆಗೆ ವಿರುದ್ದವಾಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಸಂತ್ರಸ್ತ ಯುವತಿ ಠಾಣೆಗೆ ದೂರುನೀಡಿದ್ದಳು.
ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಸಂತ್ರಸ್ತ ಯುವತಿಗೆ ಅನ್ಯಾಯ ವೆಸಗಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಲ್ಲದೆ ನ್ಯಾಯ ಒದಗಿಸಿಕೊಡುವಂತೆ ಮನವಿಮಾಡಿದ್ದಳು.
ಇದೀಗ ಆರೋಪಿ ಗುರುಪ್ರಸಾದ್ ನನ್ನು ನಗರ ಠಾಣಾ ಪೋಲೀಸರು ಇನ್ಸ್ ಪೆಕ್ಟರ್ ಆನಂತ ಪದ್ಮನಾಭ ಅವರ ತಂಡ ಅಮ್ಟಾಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.





