ಮುಂಬೈಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವಿಟ್ಲ ನಿವಾಸಿ ಮೃತ್ಯು
ವಿಟ್ಲ: ಮುಂಬೈಯಲ್ಲಿ ನಡೆದ ಲಾರಿ ಅಪಘಾತದಲ್ಲಿ ವಿಟ್ಲ ಸಮೀಪದ ಮಾಮೇಶ್ವರ ಕಟ್ಟೆ ಬಳಿಯ ನವಗ್ರಾಮ ನಿವಾಸಿ ಯೋರ್ವರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮಾಮೇಶ್ವರ ಕಟ್ಟೆ ಬಳಿಯ ನವಗ್ರಾಮ ನಿವಾಸಿ ಧರ್ಮ(45 ವ.) ರವರು ಮೃತದುರ್ದೈವಿ. ಧರ್ಮ ರವರು ಮುಂಬೈನಲ್ಲಿ ಲಾರಿಯೊಂದರಲ್ಲಿ ಚಾಲಕರಾಗಿ ಕೆಲಸ ನಿರ್ವಹಿಸಿಸುತ್ತಿದ್ದು, ತಿಂಗಳಿಗೊಮ್ಮೆ ಊರಿಗೆ ಬಂದು ಹೋಗುತ್ತಿದ್ದರು. ಇದೀಗ ಅವರು
ಲಾರಿ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.
ಮೃತದೇಹವನ್ನು ಮುಂಬೈಯಿಂದ ಮಾಮೇಶ್ವರ ಕಟ್ಟೆಯ ಮೃತರ ಮನೆಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಮಮತಾ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.





