September 27, 2026

ಕರಾವಳಿಯಾದ್ಯಂತ ಬಿರುಸಿನ ಗಾಳಿ: ಉಳ್ಳಾಲದಲ್ಲಿ ಶಾಲೆ, ಮನೆಗಳಿಗೆ ಹಾನಿ

0
image_editor_output_image-940206023-1721973835823.jpg

ಉಳ್ಳಾಲ: ಗಾಳಿ ಮಳೆಗೆ ಕಲ್ಲಾಪು ಪಟ್ಟದ ಸರಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿಗೆ ಹಾನಿಯಾಗಿ ಹಂಚು ಹಾರಿ ಹೋಗಿದ್ದು, ಘಟನೆ ಸಂದರ್ಭ ವಿದ್ಯಾರ್ಥಿಗಳು ಇಲ್ಲದ ಕಾರಣ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.

ಇನ್ನೊಂದು ಘಟನೆಯಲ್ಲಿ ಪಜೀರು ಗ್ರಾಮದ ಸಂಬಾರ ತೋಟದಲ್ಲಿ ಗಾಳಿ ಮಳೆಯಿಂದ ವಿದ್ಯುತ್ ಕಂಬಕ್ಕೆ ಮರ ಬಿದ್ದು ಮೂರು ಮನೆಗಳು ಹಾನಿಗೀಡಾಗಿವೆ.

 

ಕಲ್ಲಾಪು ಪಟ್ಲದ ಶಾಲೆಯ ಮೇಲ್ಮಹಡಿಗೆ ಹಂಚು ಹಾಕಿದ್ದು, ಗಾಳಿ ಬೀಸಿದ ಪರಿಣಾಮ ಹಂಚು ಹಾರಿ ಹೋಗಿದೆ. ಸ್ಥಳಕ್ಕೆ ಸ್ಥಳೀಯ ಕೌನ್ಸಿಲರ್ ಬಾಝಿಲ್ ಡಿ’ಸೋಜ ಮತ್ತು ಉಳ್ಳಾಲ ನಗರದಭೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ

Leave a Reply

Your email address will not be published. Required fields are marked *

You may have missed

error: Content is protected !!