ಅಬೂಬಕರ್ ಅನಿಲಕಟ್ಟೆ ಗೆ ಸನ್ಮಾನ
ವಿಟ್ಲ; ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಲೇಖಕ ಅಬೂಬಕರ್ ಅನಿಲಕಟ್ಟೆ ಯವರನ್ನು ಬೆಂಗಳೂರಿನ ಹೆಚ್ ಬಿ.ಆರ್ ಲೇಔಟ್ ನಲ್ಲಿರುವ ಬ್ಯಾರಿ ಭವನದಲ್ಲಿ ಸ್ಪೀಕರ್ ಯು.ಟಿ.ಖಾದರ್ ರವರು ಸನ್ಮಾನಿಸಿದರು.
ಈ ಸಂದರ್ಭ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್., ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ,ಉಮ್ನರ್ ಟೀಕೆ ರಿಜಿಸ್ಟ್ರಾರ್ ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.


