September 27, 2026

ಕಾರ್ಕಳ ನಕಲಿ ಪರುಶುರಾಮ ಮೂರ್ತಿ ಪ್ರಕರಣ: ಉಡುಪಿ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅಮಾನತು

0
image_editor_output_image1279198599-1721890723403.jpg

ಉಡುಪಿ: ಕಾರ್ಕಳದ ಬೈಲೂರಿನಲ್ಲಿ ನಿರ್ಮಿಸಲಾಗಿರುವ ನಕಲಿ ಪರುಶುರಾಮ ಮೂರ್ತಿ ವಿವಾದಕ್ಕೆ ಇದೀಗ ಮೊದಲ ತಲೆದಂಡವಾಗಿದೆ. ಉಡುಪಿ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅಮಾನತು ಮಾಡಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಾಜಿ ಸಚಿವ ಹಾಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕನಸಿನ ಪರುಶುರಾಮ್ ಥೀಮ್ ಪಾರ್ಕ್ ನಲ್ಲಿ ನಿರ್ಮಿಸಲಾಗಿರುವ ಕಂಚಿನ ಪರುಶುರಾಮ ಮೂರ್ತಿ ನಕಲಿ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ ಸರಕಾರ ಈ ಪ್ರಕರಣದ ತಿನಿಖೆಗೆ ನ್ಯಾ.ನಾಗಮೋಹನ್ ದಾಸ್ ವಿಚಾರಣಾ ಆಯೋಗವನ್ನು ನೇಮಿಸಿದ್ದು. ತನಿಖೆ ಮುಂದುವರೆದಿದೆ.

 

ನಡುವೆ ನಕಲಿ ಪರುಶುರಾಮ ಮೂರ್ತಿ ಸಂಬಂಧ ಮೊದಲ ತಲೆದಂಡವಾಗಿದ್ದು, ಪರುಶುರಾಮ ಥೀಮ್ ಪಾರ್ಕ್ ನಿರ್ಮಾಣದ ಉಸ್ತುವಾರಿ ಹೊತ್ತಿದ್ದ ಉಡುಪಿ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!