ಯಂಗ್ ಮೆನ್ಸ್ ಇರ್ವತ್ತೂರು ಮಹಾಸಭೆ: ಅಧ್ಯಕ್ಷರಾಗಿ ಸಫ್ವಾನ್ ಗುಂಪಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ಅಫೀಲ್ ಇರ್ವತ್ತೂರು ಆಯ್ಕೆ
ಇರ್ವತ್ತೂರು: ಬದ್ರಿಯಾ ಯಂಗ್ ಮೆನ್ಸ್ ಅಸೋಶಿಯೇಶನ್ ಇರ್ವತ್ತೂರು ಪದವು (BYMA) ಬಂಟ್ವಾಳ ತಾಲೂಕು ಇದರ ವಾರ್ಷಿಕ ಮಹಾಸಭೆ ಮತ್ತು 2021-2022 ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಇರ್ವತ್ತೂರು ಮದ್ರಸತ್ತುದೀನಿಯ ಮದರಸ ಹಾಲ್ ನಲ್ಲಿ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಉಮರ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಾಸಭೆಯ ಚುನಾವಣೆ ವೀಕ್ಷಕರಾಗಿ ಸದರ್ ಉಸ್ತಾದರಾದ ರಫೀಕ್ ಮದನಿ, ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಕಮೀಟಿಯ ಸೇವಕರಾದ ಎಸ್.ಪಿ.ರಫೀಕ್ ,ಬದ್ರಿಯಾ ಯಂಗ್ ಮೆನ್ಸ್ ಅಸೋಶಿಯೇಶನ್ ಇದರ ಅಧ್ಯಕ್ಷರಾದ ಜಾಫರ್ ಪಂಜೋಡಿ,ಬಿಜೆಎಮ್ ಪ್ರವಾಸಿ ಕಮೀಟಿಯ ಪ್ರತಿನಿಧಿಗಳಾದ ಎಸ್.ಪಿ.ಸಲೀಂ, ಝಹೀರ್ ಮತ್ತು ಆಡಳಿತ ಕಮೀಟಿಯ ಪ್ರತಿನಿಧಿಯಾಗಿರುವ ಎಸ್.ಪಿ.ರಶೀದ್,ಕಾಂಟ್ರಾಕ್ಟರ್ ಇಬ್ರಾಹೀಂ ರವರ ಗೌರವ ಉಪಸ್ಥಿತಿಯಲ್ಲಿ ನಡೆಯಿತು.
ದುಆದೊಂದಿಗೆ ಚಾಲನೆ ನೀಡಿದ ಖತೀಬರು, ಬದ್ರಿಯಾ ಯಂಗ್ ಮೆನ್ಸ್ ಅಸೋಶಿಯೇಶನ್ ಇದರ ಪ್ರಧಾನ ಕಾರ್ಯದರ್ಶಿ ಅಫೀಲ್ ಇರ್ವತ್ತೂರು 2020-2021ರ ಸಾಲಿನ ಲೆಕ್ಕ ಪತ್ರ ಮಂಡನೆ ಮಾಡಿದರು.
ನಂತರ 2021-2022 ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವ ಸಲಹೆಗಾರ:ಅಝರ್ ಪಂಜೋಡಿ,
ಅಧ್ಯಕ್ಷರು:ಸಫ್ವಾನ್ ಗುಂಪಕಲ್ಲು
ಉಪಾಧ್ಯಕ್ಷ:ಎಸ್.ಪಿ ಆಫ್ರಿದ್
ಪ್ರಧಾನ ಕಾರ್ಯದರ್ಶಿ: ಅಫೀಲ್ ಇರ್ವತ್ತೂರು ಉಪಕಾರ್ಯದರ್ಶಿ:ಶಾರುಖ್
ಖಜಾಂಜಿ:ಸುಪೈಲ್
ಲೆಕ್ಕಪರಿಶೋಧಕ:ಅಲ್ತಾಫ್ ಇವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರು:
ಜಾಫರ್ ಪಂಜೊಡಿ
ಫೈಝಲ್ ಏನ್ ಆರ್ ಎಫ್
ಎಸ್.ಪಿ.ತೌಸಿಫ್
ಮೊಹಮ್ಮದ್
ಇರ್ಫಾನ್
ತೌಫಿಕ್
ನೌಫನ್ ಪಂಜೋಡಿ
ಸಿಮಾಕ್
ಮತ್ತು
ಖಲಂದರ್ ಆಯ್ಕೆಯಾದರು.
BJM ಇರ್ವತ್ತೂರು ಆಡಳಿತ ಕಮೀಟಿಯ ಸೇವಕರಾದ SP ರಫೀಕ್ ಪ್ರಾಸ್ತಾವಿಕ ವಾಗಿ ಮಾತನಾಡಿದರು ಮತ್ತು ಬಿಜೆಎಮ್ ಪ್ರವಾಸಿ ಕಮೀಟಿಯ ಪ್ರತಿನಿಧಿ ಎಸ್.ಪಿ.ಸಲೀಂ ಮಾತನಾಡಿ ಹಲವು ಸಲಹೆಗಳನ್ನು ಯುವಕರಿಗೆ ನೀಡಿದರು.
ಖತೀಬರು ಚುನಾವಣೆ ಪ್ರಕ್ರಿಯೆಯನ್ನು ನಡೆಸಿ ,ಯುವಕರ ಮಹತ್ವದ ಬಗ್ಗೆ ಅಧ್ಯಕ್ಷೀಯ ಭಾಷಣ ಮಾಡಿದರು.ಅಝರ್ ಪಂಜೋಡಿ ಸ್ವಾಗತಿಸಿ,ನಿರೂಪಿಸಿ,ಧನ್ಯವಾದ ಹೇಳಿದರು.






