ಐದು ಲಾರಿಗಳ ನಡುವೆ ಭೀಕರ ಅಪಘಾತ:
ನಾಲ್ವರು ಮೃತ್ಯು
ಹಿರಿಯೂರು: ಮುಂದೆ ಹೋಗುತ್ತಿದ್ದ ಲಾರಿಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಬೈಪಾಸ್ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
5 ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಒಂದು ಲಾರಿ ಮುಖ್ಯರಸ್ತೆಯಿಂದ ಸೇವಾ ರಸ್ತೆಗೆ ಬಿದ್ದಿದೆ. ಅದರಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಐದು ಲಾರಿಗಳ ಪೈಕಿ ನಾಲ್ಕು ಲಾರಿಗಳಲ್ಲಿ ಈರುಳ್ಳಿ ತುಂಬಿಸಲಾಗಿತ್ತು.





