July 14, 2025

ಉಪ್ಪಿನಂಗಡಿ: ಬೈಕ್ ಗಳ ನಡುವೆ ಅಪಘಾತ: ಒಬ್ಬ ಮೃತ್ಯು

0
parking-lot-accidents-what-happens-if-your-insurance-lapses-and-you-have-an-accident-

ಉಪ್ಪಿನಂಗಡಿ: ಬೈಕ್‍ಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರನೋರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ತುರ್ಕಳಿಕೆ ಎಂಬಲ್ಲಿ ರಾತ್ರಿ ನಡೆದಿದೆ.

ಬಾರ್ಯ ಪರಿಸರದ ನಿವಾಸಿಗಳಾದ ಶಿವಾನಂದ ಮತ್ತು ಅವರ ಸಹೋದರ ಕಲ್ಲೇರಿಯಿಂದ ಬಾರ್ಯದಲ್ಲಿರುವ ತಮ್ಮ ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕರೀಂ ಎಂಬವರು ಬೈಕ್ ಚಲಾಯಿಸಿಕೊಂಡು ಬಂದಿದ್ದು, ಈ ಸಂದರ್ಭ ಎರಡು ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿತ್ತು. ಈ ಪರಿಣಾಮ ಶಿವಾನಂದ ಎಂಬವರು ರಸ್ತೆಗೆಸೆಯಲ್ಪಟ್ಟು, ಗಂಭೀರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ‌

ಘಟನೆಯಿಂದ ಧನಂಜಯ, ರವಿ, ಅಸ್ಮಾನ್ ಹಾಗೂ ಕರೀಂ ಎಂಬವರು ಗಾಯಗೊಂಡಿದ್ದು, ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 

 

 

Leave a Reply

Your email address will not be published. Required fields are marked *

error: Content is protected !!