ಅನಿಮಲ್ ಸಿನೆಮಾ ನಿರ್ಮಾಪಕನ ಪುತ್ರಿ ಕ್ಯಾನ್ಸರ್ ನಿಂದ ನಿಧನ

ದಿಲ್ಲಿ: ಅನಿಮಲ್, ಭೂಲ್ ಭುಲಯ್ಯ 2 ಸಿನಿಮಾ ನಿರ್ಮಾಪಕ ಕೃಷ್ಣ ಕುಮಾರ್ ಅವರ ಏಕೈಕ ಪುತ್ರಿ ತಿಶಾ ಕುಮಾರ್ 20ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಿಶಾ ಜು.18ರಂದು ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಅಧಿಕೃತವಾಗಿ ತಿಳಿಸಿದ್ದಾರೆ.
ಕ್ಯಾನ್ಸರ್‌ನಿಂದ ಬಳುತ್ತಿದ್ದ ತಿಶಾಗೆ ಕುಟುಂಬಸ್ಥರು ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು ಗುರುವಾರದಂದು (ಜು.18) ಚಿಕಿತ್ಸೆ ಫಲಕಾರಿಯಾಗದೇ ತಿಶಾ ನಿಧನರಾಗಿದ್ದಾರೆ. ಈಗ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಪುತ್ರಿಯ ನಿಧನ ಕೃಷ್ಣ ಕುಮಾರ್ ದಂಪತಿಗೆ ಆಪ್ತರಿಗೆ ಆಘಾತವುಂಟು ಮಾಡಿದೆ.