May 5, 2026

ವಿಟ್ಲ: ಜುಲೈ 20ರಂದು ಪರ್ತಿಪ್ಪಾಡಿ ಔಹರುಲ್ ಮದಾರಿಸ್ ದರ್ಸ್ ಕಟ್ಟಡ ಉದ್ಘಾಟನೆ

0
image_editor_output_image-179400380-1721215481770

ವಿಟ್ಲ: ಪರ್ತಿಪ್ಪಾಡಿ ಜುಮ್ಮಾ ಮಸೀದಿಯ ಅಧೀನದಲ್ಲಿರುವ ಸಮಸ್ತ ದ ಸ್ಥಳೀಯ ಯುವ ಸಂಘಟನೆ ಎಸ್. ವೈ. ಎಸ್. ಮತ್ತು ಎಸ್. ಕೆ. ಎಸ್.ಎಸ್. ಎಫ್. ವತಿಯಿಂದ ನಿರ್ಮಾಣ ಮಾಡಲಾದ ನೂತನ ಔಹರುಲ್ ಮದಾರಿಸ್ ದರ್ಸ್ ಕಟ್ಟಡದ ಉದ್ಘಾಟನೆ ಜು.೨೦ರಂದು ನಡೆಯಲಿದೆ ಎಂದು ಕಾರ್ಯಕ್ರಮದ ಉಸ್ತುವಾರಿ ವಿ.ಪಿ. ಉಮರ್ ದಾರಿಮಿ ಪರ್ತಿಪ್ಪಾಡಿ ಹೇಳಿದರು.

ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ
ಸಾಯಂಕಾಲ ೪ ಗಂಟೆಗೆ ಕಟ್ಟಡದ ಉದ್ಘಾಟನೆಯನ್ನು ಉಲಮಾ ಸಂಘಟನೆಯಾದ ಸಮಸ್ತ ದ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಜಮಾತ್ ಅಧ್ಯಕ್ಷ ಪಿ.ಎಂ. ಅಬ್ದುಲ್ ಹಕೀಂ ಪರ್ತಿಪ್ಪಾಡಿ ವಹಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹಿರಿ, ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ಉಸ್ಮಾನುಲ್ ಫೈಝಿ ತೋಡಾರ್, ಎಸ್ಕೆಎಸ್ಸೆಸ್ಸೆಫ್ ದ ಕ ಜಿಲ್ಲಾ ವೆಸ್ಟ್ ಸಮಿತಿ ಅಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಸ್ಥಳೀಯ ಜುಮ್ಮಾ ಮಸೀದಿಯ ಮುದರ್ರಿಸ್ ಅಬ್ದುರ್ರ್‍ಅಹ್ಮಾನ್ ಫೈಝಿ ಜಜಾಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪರ್ತಿಪ್ಪಾಡಿ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಎಂ. ಅಬ್ದುಲ್ ಹಕೀಂ, ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ, ಪರ್ತಿಪ್ಪಾಡಿ ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಹಂಝ ಹನೀಫ್, ಅಧ್ಯಕ್ಷ ಅಬ್ದುಲ್ ಅಝೀಝ್ ಯಮಾನಿ, ಎಸ್. ವೈ. ಎಸ್. ಅಧ್ಯಕ್ಷ ಎ. ಮಹಮ್ಮದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!