ಬಂಟ್ವಾಳ: ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆ
ಬಂಟ್ವಾಳ: ಅತಿಯಾಗಿ ಮಳೆಯಾಗುತ್ತಿರುವ ಕಾರಣದಿಂದ ನೇತ್ರಾವತಿ ನದಿ ನೀರಿನ ಮಟ್ಟ ಜುಲೈ 15ರ ಸಂಜೆ ವೇಳೆ ಏರಿಕೆಯಾಗಿದ್ದು, 6.1 ಮೀ.ನಷ್ಟಿದೆ ಎಂದು ಇಲಾಖೆ ತಿಳಿಸಿದೆ.
ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆಯೂ ತಿಳಿಸಿದ್ದಾರೆ.
ನೇತ್ರಾವತಿ ನದಿ ನೀರಿನ 8.5 ಮೀ.ಏರಿಕೆಯಾದರೆ ಬಂಟ್ವಾಳದ ಕೆಲವು ತಗ್ಗುಪ್ರದೇಶಗಳು ಜಲಾವೃತಗೊಳ್ಳುತ್ತದೆ. ಆದರೆ ರಾತ್ರಿ ವೇಳೆ ಮತ್ತೆ ಜಾಸ್ತಿ ಮಳೆಯಾದರೆ ಮಾತ್ರ ಮತ್ತೆ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಗಳಿವೆ.




