ಕಾಪು: ದೈವಸ್ಥಾನಗಳಲ್ಲಿ ಕಾಣಿಕೆ ಡಬ್ಬಿಗೆ ಕಳವುಗೈದ ಆರೋಪಿಯ ಬಂಧನ
ಕಾಪು: ಉಡುಪಿ ಮತ್ತು ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ದೈವಸ್ಥಾನಗಳಲ್ಲಿ ಕಾಣಿಕೆ ಡಬ್ಬಿಗೆ ಕೈ ಹಾಕಿದ ಚೋರನೋರ್ವ ಬಳಿಕ ಅತಿಯಾದ ನಿದ್ದೆಯಿಂದ ಎಚ್ಚರಗೊಳ್ಳದೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ. ಇದಕ್ಕೆ ದೈವದ ಕಾರಣಿಕವೇ ಕಾರಣ ಎಂದು ಸ್ಥಳೀಯರು ನಂಬಿದ್ದಾರೆ.
ಬಾಗಲಕೋಟೆ ಜಿಲ್ಲೆಯ ನವ ನಗರ ಐಟಿಐ ಕಾಲೇಜು ಬಳಿ ನಿವಾಸಿ ಮುದುಕಪ್ಪ ಬಾಳಪ್ಪ ಬಿದರಿ (23) ಸಿಕ್ಕಿಬಿದ್ದ ಆರೋಪಿ.
ಜು. 6ರಂದು ರಾತ್ರಿ ಕಟಪಾಡಿ ಫಾರೆಸ್ಟ್‌ಗೇಟ್ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ್ದನು. ಈತ ಕಾಣಿಕೆ ಡಬ್ಬಿ ಎಗರಿಸುವ ದೃಶ್ಯಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದವು. ಈ ಸಂಬಂಧ ದೈವಸ್ಥಾನದ ಆಡಳಿತ ಮಂಡಳಿಗಳು ಠಾಣೆಗಳಲ್ಲಿ ದೂರು ನೀಡಿದ್ದವು.





