May 5, 2026

ಮಂಗಳೂರು: ಲಾರಿ ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು

0
IMG-20240711-WA0003.jpg

ಮಂಗಳೂರು: ನಗರ ಕುಂಟಿಕಾನ ಎ.ಜೆ ಆಸ್ಪತ್ರೆ ಬಳಿ ರಾ.ಹೆ. 66 ರಲ್ಲಿ ಲಾರಿ ಢಿಕ್ಕಿಯಾದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.

ಮೃತಪಟ್ಟಿರುವ ವ್ಯಕ್ತಿಯ ಮಾಹಿತಿ ಲಭ್ಯವಾಗಿಲ್ಲ. ಕೊಟ್ಟಾರ ಕಡೆಯಿಂದ ಕೆಪಿಟಿ ಕಡೆಗೆ ಹೋಗುತ್ತಿದ್ದ ಲಾರಿ ಢಿಕ್ಕಿ ಯಾಗಿದೆ. ಲಾರಿಯ ಚಕ್ರಗಳು ಹರಿದು ತಲೆ ಸಂಪೂರ್ಣ ವಾಗಿ ಜಜ್ಜಿ ಹೋಗಿದ್ದು, ಗುರುತು ಸಿಗದಂತಾಗಿದೆ. ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!