May 6, 2026

ಉಳ್ಳಾಲ: ಸೋಮೇಶ್ವರ ರೈಲ್ವೇಗೇಟ್ ಬಂದ್

0
image_editor_output_image567129734-1720594095451.jpg

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರಿಂದ ಕೋಟೆಕಾರು ಮಾರ್ಗವಾಗಿ ಸೋಮೇಶ್ವರ ದೇವಸ್ಥಾನ ಸಹಿತ ಉಳ್ಳಾಲ ಪುರಸಭೆ ಸಂಪರ್ಕಿಸುವ ಉಳ್ಳಾಲ ರೈಲು ನಿಲ್ದಾಣ ಬಳಿಯ ಸೋಮೇಶ್ವರ ರೈಲ್ವೇಗೇಟನ್ನು ಜುಲೈ 10ರ ಬುಧವಾರ ಬೆಳಗ್ಗೆ 10 ಗಂಟೆಯಿಂದ ಜುಲೈ 16ರ ಮಂಗಳವಾರದವರೆಗೆ ಮುಚ್ಚಲಾಗುತ್ತದೆ ಎಂದು ದಕ್ಷಿಣ ರೈಲ್ವೇಯ ಸೆಕ್ಷನ್‌ ಎಂಜಿನಿಯರಿಂಗ್‌ ವಿಭಾಗದ ಪ್ರಕಟನೆ ತಿಳಿಸಿದೆ.

ಏಳು ದಿನಗಳ ಕಾಲ ಈ ರೈಲ್ವೇ ಲೆವೆಲ್ ಕ್ರಾಸಿಂಗ್‌ ನಲ್ಲಿ ತುರ್ತು ಹಳಿ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಹಾಗಾಗಿ ಈ ಮಾರ್ಗದಲ್ಲಿ ಸಂಚಾರವನ್ನು ನಿಷೇಧಿಸಲಾಗುತ್ತದೆ ಎಂದು ಪ್ರಕಟನೆ ವಿವರಿಸಿದೆ.

Leave a Reply

Your email address will not be published. Required fields are marked *

error: Content is protected !!