March 17, 2026

ಉಪ್ಪಿನಂಗಡಿ: ಚಹಾ ಕುಡಿದು ಲಾರಿಯತ್ತ ತೆರಳುತ್ತಿದ್ದಾಗ ಕಾರು ಢಿಕ್ಕಿ: ಇಬ್ಬರು ಚಾಲಕರು ಗಂಭೀರ

0
image_editor_output_image-142457805-1720505402067.jpg

ಉಪ್ಪಿನಂಗಡಿ : ಹೊಟೇಲೊಂದರಲ್ಲಿ ಚಹಾ ಕುಡಿದು ತಮ್ಮ ಲಾರಿಯತ್ತ ತೆರಳುತ್ತಿದ್ದ ಚಾಲಕರಿಬ್ಬರಿಗೆ ಕಾರು ಡಿಕ್ಕಿ ಹೊಡೆದ ಘಟನೆ ನೆಲ್ಯಾಡಿ ಸಮೀಪ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75 ರ ನೆಲ್ಯಾಡಿಯ ಕೋಲ್ಪೆ ಎಂಬಲ್ಲಿ ಈ ಅಪಘಾತ ನಡೆದಿದ್ದು ಚಾಲಕರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೊಟೇಲ್ ಒಂದರಲ್ಲಿ ಚಹಾ ಕುಡಿದ ಬರುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು ವೇಗವಾಗಿ ಈ ಇಬ್ಬರಿಗೆ ಢಿಕ್ಕಿ ಹೊಡೆದಿದೆ.

ಬಳಿಕ ಅಲ್ಲೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಈಚರ್ ಲಾರಿಗೂ ಢಿಕ್ಕಿ ಹೊಡೆದು ನಿಂತಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಚಾಲಕರಿಬ್ಬರೂ ರಸ್ತೆಗೆ ಹಾರಿ ಬಿದ್ದಿದ್ದು ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!