ಕಾರ್ಖಾನೆಯಲ್ಲಿ ಅನಿಲ ಸೋರಿಕೆ:
ಒಬ್ಬರು ಮೃತ್ಯು, 13 ಜನರು ಆಸ್ಪತ್ರೆಗೆ ದಾಖಲು
ತಮಿಳುನಾಡು: ಬ್ಲೀಚಿಂಗ್ ಪೌಡರ್ ಉತ್ಪಾದನಾ ಘಟಕದಿಂದ ದ್ರವ ಕ್ಲೋರಿನ್ ಅನಿಲ ಸೋರಿಕೆಯಾದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಇತರ 13 ಜನರು ಉಸಿರಾಟದ ತೊಂದರೆ ಅನುಭವಿಸಿದ ಘಟನೆ ಈರೋಡ್ ಜಿಲ್ಲೆಯ ಚಿತ್ತೋಡ್ ಬಳಿಯ ಶ್ರೀಧರ್ ಕೆಮಿಕಲ್ಸ್ ಘಟಕದಲ್ಲಿ ಈ ಘಟನೆ ನಡೆದಿದೆ.
ಶನಿವಾರದಂದು ಘಟಕದ ಮಾಲೀಕ ನಡುಪಾಳ್ಯಂ ಗ್ರಾಮದ ದಾಮೋಧರನ್ (40) ಅವರು ಪೈಪ್ ದೋಷ ಸರಿಪಡಿಸಲು ಯತ್ನಿಸುತ್ತಿದ್ದಾಗ ಲಿಕ್ವಿಡ್ ಕ್ಲೋರಿನ್ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ದಾಮೋಧರನ್ ಹೊರತುಪಡಿಸಿ, ಘಟಕದ ಕೆಲವು ಉದ್ಯೋಗಿಗಳು ಮತ್ತು ನೆರೆಹೊರೆಯಲ್ಲಿ ವಾಸಿಸುವ ಜನರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಮತ್ತು ಎಲ್ಲರನ್ನೂ ಈರೋಡ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಘಟನೆ ಬೆಳಕಿಗೆ ಬಂದ ನಂತರ, ಈರೋಡ್, ಭವಾನಿ ಮತ್ತು ಪೆರುಂದುರೈ ಅಗ್ನಿಶಾಮಕ ಠಾಣೆಗಳಿಂದ ನಾಲ್ಕು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು ಸ್ಥಳಕ್ಕೆ ಧಾವಿಸಿದವು. ಅಧಿಕಾರಿಗಳು ಮೊದಲು ತಂತ್ರಜ್ಞರ ಸಹಾಯದಿಂದ ಪೈಪ್‌ನಲ್ಲಿನ ಸೋರಿಕೆಯನ್ನು ಮುಚ್ಚಿದರು.
ಏತನ್ಮಧ್ಯೆ, ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ ಜನರು ಪ್ರಸ್ತುತ ಸ್ಥಿರರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





