March 17, 2026

ಕಾಸರಗೋಡು: ನಿರ್ಮಾಣ ಹಂತದ ಮನೆಯ ಶೆಡ್ ಕುಸಿತ: ಅವಶೇಷಗಳಡಿ ಸಿಲುಕಿ ಕಾರ್ಮಿಕ ಮೃತ್ಯು

0
image_editor_output_image430110206-1720159000573.jpg

ಕಾಸರಗೋಡು: ನಿರ್ಮಾಣ ಹಂತದ ಮನೆಯ ಸನ್ ಶೆಡ್ ಕುಸಿದು ಬಿದ್ದ ಪರಿಣಾಮ ಕಾರ್ಮಿಕ ಮೃತಪಟ್ಟ ಘಟನೆ ಮೊಗ್ರಾಲ್ ಪುತ್ತೂರು ಸಮೀಪದ ಮೈಮೂನಾ ನಗರದ ಲ್ಲಿ ಬುಧವಾರ ನಡೆದಿದೆ.

ಉತ್ತರ ಪ್ರದೇಶ ಮೂಲದ ಅಮರೇಂದ್ರ (24) ಮೃತ ಪಟ್ಟವನು. ನೂತನ ಮನೆಯ ನಿರ್ಮಾಣ ಕೆಲಸ ನಡೆಸುತ್ತಿದ್ದಾಗ ಘಟನೆ ನಡೆದಿದೆ. ಸನ್ ಶೇಡ್ ನ ಹಲಗೆ ತೆಗೆಯುತ್ತಿದ್ದಾಗ ಈ ಘಟನೆ ನಡೆದಿದೆ.

ಅವಶೇಷ ಗಳಡಿ ಸಿಲುಕಿದ್ದ ಅಮರೇಂದ್ರ ರವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟರು. ಮೃತದೇಹ ವ ನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!