May 6, 2026

ಬೈಂದೂರು: ಭಾರೀ ಗಾಳಿ ಮಳೆಗೆ ಹೊಟೇಲ್ ಮೇಲ್ಛಾವಣಿ ಕುಸಿತ

0
image_editor_output_image1420522658-1719985901584.jpg

ಬೈಂದೂರು: ಮಂಗಳವಾರ ಮುಂಜಾನೆ ಬೀಸಿದ ಭಾರೀ ಗಾಳಿ ಮಳೆಗೆ ಶಿರೂರು ಗಡಿ ಭಾಗದಲ್ಲಿರುವ ಹೊಟೇಲೊಂದರ ಮೇಲ್ಛಾವಣಿ ಹಾರಿ ಹೋಗಿದೆ. ಗಾಳಿಯ ಅಬ್ಬರಕ್ಕೆ ಹೊಟೇಲ್‌ ಸಂಪೂರ್ಣ ಹಾನಿಗೊಂಡಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಮಂಗಳವಾರ ಬೆಳಗ್ಗೆ 9 ಗಂಟೆಗೆ ಒಮ್ಮೆಲೆ ಸುಂಟರಗಾಳಿ ಮೇಲೆದ್ದಿದೆ. ಸಹಜವಾಗಿ ಬಯಲು ಪ್ರದೇಶವಾದುದರಿಂದ ಹೆಚ್ಚಿಗೆ ಮನೆಗಳಿರಲಿಲ್ಲ.

ಬೀಸಿದ ಗಾಳಿ ಹೆದ್ದಾರಿ ಸಮೀಪ ಇರುವ ಹೊಟೇಲ್‌ ಒಂದರ ಮೇಲ್ಛಾವಣಿಯನ್ನು ಹಾರಿಸಿಕೊಂಡು ಹೋಗಿದೆ. ಸ್ಟೀಲ್‌ ಶೀಟ್‌ಗಳು ಗೋಡೆಗೆ ಹಾಕಿದ ಮೊಳೆಗಳ ಸಹಿತ ಮೇಲೆದ್ದು ಕೆಳಗೆ ಬಿದ್ದಿದೆ.ಹೊಟೇಲ್‌ನ ಒಳಾಂಗಣ ಫ್ಯಾನ್‌ ಕಳಚಿ ಬಿದ್ದಿದೆ.

Leave a Reply

Your email address will not be published. Required fields are marked *

error: Content is protected !!