ಬೆಳ್ತಂಗಡಿ: ವಿದ್ಯುತ್ ಶಾಕ್ ಗೆ ಜಿಲ್ಲೆಯಲ್ಲಿ ಮತ್ತೊಂದು ಸಾವು: ವಿದ್ಯುತ್ ಪ್ರವಹಿಸಿ ಯುವತಿ ಮೃತ್ಯು
ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಮಳೆಯಿಂದಾಗಿ ಮತ್ತೊಂದು ಬಲಿಯಾಗಿದೆ. ಕಂಬವನ್ನು ಮುಟ್ಟಿದ ಪರಿಣಾಮ, ವಿದ್ಯುತ್ ಪ್ರವಹಿಸಿ ಯುವತಿಯೊಬ್ಬಳು ದುರ್ಮರಣ ಹೊಂದಿರೋದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ಮಳೆಗೆ ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ(20) ಸಾವನ್ನಪ್ಪಿದ್ದಾರೆ.
ಈ ಮೂಲಕ ಕರಾವಳಿಯಲ್ಲಿ ಮಳೆಯಿಂದಾಗಿ ಇದು ಎರಡನೇ ಬಲಿಯಾಗಿದೆ.
ಮನೆಯಿಂದ ಪಾರ್ಸಲ್ ತೆಗೆದುಕೊಂಡು ಬರೋದಕ್ಕೆ ಹೊರ ಬಂದಿದ್ದಂತ ಪ್ರತೀಕ್ಷಾ ಶೆಟ್ಟಿ, ಮನೆ ಬಳಿಯ ಕಂಬವನ್ನು ಟಚ್ ಮಾಡಿದ್ದರಿಂದ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.