May 3, 2026

ವಿಟ್ಲ: ಭಾರೀ ಮಳೆಗೆ ಹೆದ್ದಾರಿ ಮಧ್ಯೆದಲ್ಲಿ ಭೂ ಕುಸಿತ: ಅಪಾಯದಲ್ಲಿ ರಸ್ತೆ-ವಾಹನ ಚಾಲಕರ ಪರದಾಟ

0
image_editor_output_image-1987207249-1719397131238

ವಿಟ್ಲ : ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ರಸ್ತೆ ಕುಸಿತವಾದ ಘಟನೆ ವಿಟ್ಲ ಸಮೀಪದ ಬೊಬ್ಬೆಕೇರಿಯಲ್ಲಿ ನಡೆದಿದೆ.

ವಿಟ್ಲ-ಮಂಗಳೂರು ರಾಜ್ಯ ಹೆದ್ದಾರಿಯ ವಿಟ್ಲ ಪೇಟೆಗೆ ಸಮೀಪವಿರುವ ಬೊಬ್ಬೆಕೇರಿ ಪರಿಸರದ ಕರ್ನಾಟಕ ಬ್ಯಾಂಕ್ ಮುಂಭಾಗ ವಿಪರೀತ ಮಳೆ ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಇರುವ ಕಾರಣ ರಸ್ತೆಯಲ್ಲೇ ನೀರು ಹರಿದು ಮತ್ತು ನೀರು ನಿಂತು ರಸ್ತೆಯ ನಡುವೆ ಭೂ ಕುಸಿತಗೊಂಡಿದೆ.

ದೈನಂದಿನ ವ್ಯವಹಾರಕ್ಕೆ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಇದೀಗ ಸಂಚಾರ ಅಪಾಯದಲ್ಲಿದೆ.

Leave a Reply

Your email address will not be published. Required fields are marked *

error: Content is protected !!