March 17, 2026

ಕಟ್ಟಡದ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆ

0
image_editor_output_image106476358-1719165478161.jpg

ರಾಯಚೂರು: ಸ್ವಾಧಾರ ಕೇಂದ್ರ ಕಟ್ಟಡದ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ ದೇವರ ಕಾಲೋನಿಯಲ್ಲಿ ನಡೆದಿದೆ.

ಪ್ರೇಮ ವಿಚಾರಕ್ಕೆ ಠಾಣೆ ಮೆಟ್ಟಿಲು ಹತ್ತಿದ್ದ ಯುವತಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಚಿಕಿತ್ಸೆ ಫಲಕಾರಿಯಾಗದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ನಗರದ ಜಲಾಲನಗರದ ಅನುರಾಧ (19) ಮೃತ ಯುವತಿ. ಶನಿವಾರ ರಾತ್ರಿ 8:30ರ ಸಮಯದಲ್ಲಿ ಸ್ವಾಧಾರ ಕೇಂದ್ರದಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಬೆಳಗಿನ ಜಾವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಯುವತಿ ಕಟ್ಟಡದಿಂದ ಜಿಗಿದ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!