November 22, 2024

ವಿಟ್ಲ ಜೇಸಿ ಶಾಲೆ : ಮಕ್ಕಳ ಸಮಗ್ರ ವಿಕಾಸಕ್ಕೆ ಯೋಗ ಮಹತ್ವದ ಶಿಕ್ಷಣ – ಕೃಷ್ಣಾನಂದ ನಾಯಕ್

0

ಮಕ್ಕಳ ಸಮಗ್ರ ವಿಕಾಸಕ್ಕೆ ಯೋಗ ಮಹತ್ವದ ಶಿಕ್ಷಣ. ನಾವೆಲ್ಲರೂ ಮನಸ್ಸು, ದೇಹ ಮತ್ತು ಆತ್ಮ ಎಂಬ ಮೂರು ಅಂಶಗಳಿಂದ ಕೂಡಿರುತ್ತಾ , ಈ ಮೂರರ ಅಗತ್ಯಗಳನ್ನು ಪೂರೈಸಲು, ಕ್ರಮವಾಗಿ ಜ್ಞಾನ, ಆರೋಗ್ಯ ಮತ್ತು ಆಂತರಿಕ ಶಾಂತಿ ಅವಶ್ಯ. ಇದಕ್ಕೆ ಸೂಕ್ತ ಪ್ರಯತ್ನ ಯೋಗದಿಂದ ಸಾಧ್ಯ ಎಂದು ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 10ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟನೆಗೈದ  SPYSS ನ ಯೋಗ ಗುರು ಹಾಗೂ ಉದ್ಯಮಿ  ಕೃಷ್ಣಾನಂದ ನಾಯಕ್ ಇಂದಾಜೆ ಮಾತನಾಡುತ್ತಾ ಕರೆಕೊಟ್ಟರು.  ಇನ್ನೋರ್ವ ಅತಿಥಿಗಳಾದ ಶಾಲಾ ಯೋಗ ಶಿಕ್ಷಕ ಕುಶಲ ಅವರು ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಎಲ್.ಎನ್. ಕೂಡೂರು ಮಾತನಾಡಿ ಯೋಗದ ಮಹತ್ವವನ್ನು ಅರಿತು ಅದನ್ನು ಮಕ್ಕಳ ಪಠ್ಯಕ್ರಮ ಮತ್ತು ದಿನಚರಿಯಲ್ಲಿ ಅಳವಡಿಸುವುದು ಉತ್ತಮ ಎಂದು ತಿಳಿಸಿದರು.ಬಳಿಕ ವಿದ್ಯಾರ್ಥಿಗಳಿಗೆ ಯೋಗತರಬೇತಿ ನಡೆಸಲಾಯಿತು.ತರಬೇತು ದಾರರಾಗಿ ಧನ್ಯ ಮತ್ತು ನಿತಿನ್ ಸಹಕರಿಸಿದರು.ಶಾಲಾ ಸುಮಾರು 1100 ವಿದ್ಯಾರ್ಥಿಗಳು, ಶಿಕ್ಷಕರು ತರಬೇತಿಯಲ್ಲಿ ಪಾಲ್ಗೊಂಡರು.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಶಮ, ಆಧ್ಯ ,ದೃತಿ ಪ್ರಾರ್ಥಿಸಿದರು.

ಪ್ರಾಂಶುಪಾಲರಾದ ಜಯರಾಮ್ ರೈ ಸ್ವಾಗತಿಸಿ,ಶಾಲಾ ಆಡಳಿತ ಅಧಿಕಾರಿ ರಾಧಾಕೃಷ್ಣ ವಂದಿಸಿದರು.ಸಹ ಶಿಕ್ಷಕಿ ಹರ್ಷಿತ ನಿರೂಪಿಸಿದರು. ಉಪಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಸಂಯೋಜಕಿ  ಹೇಮಲತಾ ಹಾಗೂ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!