May 6, 2026

ಹಾಸನ: ಗುಂಡು ಹಾರಿಸಿ ಇಬ್ಬರ ಹತ್ಯೆ

0
169667151-muzzle-of-gun-in-mans-hand-is-pointed-at-camera-threat-of-firearms-male-criminal-holds-revolver-on.jpg

ಹಾಸನ : ಗುಂಡು ಹಾರಿಸಿ ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿರುವ ಘಟನೆ ಹಾಸನದ ಹೊಯ್ಸಳ ನಗರ ಬಡಾವಣೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಹತ್ಯೆಯಾದ ಪೈಕಿ ಓರ್ವನ ಹೆಸರು ಶರಫತ್ ಅಲಿ ಎಂದು ತಿಳಿದು ಬಂದಿದ್ದು, ಮತ್ತೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೃತ ಶರಫತ್ ಅಲಿ ಶುಂಠಿ ವ್ಯಾಪಾರಿಯಾಗಿದ್ದು, ಇತ್ತೀಚಿಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು ಎನ್ನಲಾಗಿದೆ.


ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಈ ಘಟನೆ ಸಂಬಂಧ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Leave a Reply

Your email address will not be published. Required fields are marked *

error: Content is protected !!