May 6, 2026

ಮಂಗಳೂರು: ಟೆಂಪೋ ಢಿಕ್ಕಿ: ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಮೃತ್ಯು

0
image_editor_output_image1996290087-1718864956184.jpg

ಮಂಗಳೂರು: ಟೆಂಪೋ ಢಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಮೃತಪಟ್ಟ ಘಟನೆ ಮಂಗಳೂರಿನ ಕುಚಿಕಾಡು ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಬಿಕರ್ನಕಟ್ಟೆ ನಿವಾಸಿ ರಾಧಾಕೃಷ್ಣ ರಾವ್‌ (65) ಮೃತವ್ಯಕ್ತಿ.

ಇವರು ಸಂಜೆ 5.45ರ ಸುಮಾರಿಗೆ ಕಲ್ಪನೆ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಚಿಕಾಡು ಎನ್ನುವಲ್ಲಿ ಟೆಂಪೋ ಢಿಕ್ಕಿ ಹೊಡೆದಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಅವರು ರಾತ್ರಿ 7.45ರ ಸುಮಾರಿಗೆ ಮೃತಪಟ್ಟರು.

Leave a Reply

Your email address will not be published. Required fields are marked *

error: Content is protected !!