ತನ್ನದೇ ಮೆಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿರುವಾಗ ಯುವತಿ ಕುಸಿದು ಬಿದ್ದು ಸಾವು
ಉತ್ತರಾಖಂಡ: ಮದುವೆಯ ಹಿಂದಿನ ದಿನ ತನ್ನ ಮೆಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿರುವಾಗ ಯುವತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಈ ಘಟನೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದಿದೆ. ಮೃತ ಯುವತಿ ಶ್ರೇಯಾ ಜೈನ್(28) ಎಂದು ಗುರುತಿಸಲಾಗಿದೆ.
ಮದುವೆಯ ಹಿಂದಿನ ದಿನ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ವಧು ಮೆಹಂದಿ ದಿನ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.




