May 6, 2026

ಬಂಟ್ವಾಳ: ಮನೆ ಬೀಗ ಮುರಿದು ನಗದು, ಚಿನ್ನಾಭರಣ ಕಳವು

0
47119260

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕಂಬ ಅಮರ್ ಪ್ರಿಂಟರ್ಸ್ ಬಳಿ ಕಾರಂತಕೋಡಿ ಎಂಬಲ್ಲಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ನಗದು ಸಹಿತ ಚಿನ್ನಾಭರಣ ಎಗರಿಸಿ ಪರಾರಿಯಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.


ಇಲ್ಲಿನ ನಿವಾಸಿ ಶ್ರೀಧರ ಎಂಬವರು ತನ್ನ ಕುಟುಂಬ ಸದಸ್ಯರೊಂದಿಗೆ ಸೋಮವಾರ ಸಂಜೆ ಮಗಳ ಮನೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಬಂದು ನೋಡಿದಾಗ ಮನೆಯ ಬಾಗಿಲು ಮುರಿದಿರುವುದು ಕಂಡು ಬಂದಿದ್ದು, ಜಗಲಿಯಲ್ಲಿ ಒಂದು ಹಾರೆ ಕೂಡಾ ಇತ್ತು. ಕಪಾಟಿನಲ್ಲಿ ಇಟ್ಟಿದ್ದ ಬಟ್ಟೆ ಚೆಲ್ಲಾ ಪಿಲ್ಲಿಯಾಗಿದ್ದು,  ರೂ 30 ಸಾವಿರ ನಗದು ಹಣ ಮತ್ತು 4 ಗ್ರಾಂ ತೂಕದ ಚಿನ್ನಾ ಭರಣ (ಅಂದಾಜು ಮೌಲ್ಯ ರೂ 20ಸಾವಿರ) ಹಾಗೂ  ರೂ 2ಸಾವಿರ ಮೌಲ್ಯದ ಬೆಳ್ಳಿಯ ಆಭರಣ ಕಳುವಾಗಿದೆ ಎಂದು ಬಂಟ್ವಾಳ ನಗರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!