May 6, 2026

ಹೆಬ್ರಿ: ಅಡಿಕೆ ಮರದಿಂದ ಬಿದ್ದು ಕೃಷಿಕ ಮೃತ್ಯು

0
image_editor_output_image1687577219-1718691218254.jpg

ಹೆಬ್ರಿ: ಅಡಿಕೆ ಮರದಿಂದ ಬಿದ್ದು ಕೃಷಿಕರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ವಾಸು ಪ್ರಾಯ (59) ಎಂದು ಗುರುತಿಸಲಾಗಿದೆ.

ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದು ಅಡಿಕೆ ಗಿಡಕ್ಕೆ ಮದ್ದನ್ನು ಹೊಡೆಯುವ ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ವಾಸು ರವರು ಜೂನ್ 17 ರಂದು ಕಬ್ಬಿನಾಲೆ ಗ್ರಾಮದ ಸಲ್ಲಾಬಿ ದೇವರಗುಂಡಿ ಎಂಬಲ್ಲಿರುವ ಗೋಪಾಲ ರವರ ಅಡಿಕೆ ತೋಟದಲ್ಲಿ ಅಡಿಕೆ ಮರವನ್ನು ಹತ್ತಿ ಕೊಟ್ಟೆಮಣಿ ಮೇಲೆ ಕುಳಿತುಕೊಂಡು ಮದ್ದನ್ನು ಹೊಡೆಯುತ್ತಿರುವಾಗ ಅವರಿಗೆ ರಕ್ತದೊತ್ತಡ ಹೆಚ್ಚು ಕಡಿಮೆಯಾಗಿ ಆಕಸ್ಮಿಕವಾಗಿ ಅಡಿಕೆ ಮರದಿಂದ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!