July 21, 2024

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಾಜ್ಯ ಮಟ್ಟದ ಫುಟ್‌ಬಾಲ್: ಚಾಂಪಿಯನ್ ಆದ ಪಿ.ಎ. ಇಂಜಿನಿಯರಿಂಗ್ ಕಾಲೇಜ್ ಫುಟ್‌ಬಾಲ್ ತಂಡ

0

ಮಂಗಳೂರು: ಮಂಡ್ಯ/ಮಂಗಳೂರು- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ( VTU) ಬೆಳಗಾವಿ ಇದರ ರಾಜ್ಯ ಮಟ್ಟದ ಫುಟ್‌ಬಾಲ್ ಚಾಂಪಿಯನ್‌ಶಿಪ್ 2024-25ರ ಚಾಂಪಿಯನ್ ಆಗಿ ಪಿ.ಎ. ಇಂಜಿನಿಯರಿಂಗ್ ಕಾಲೇಜ್ ಮಂಗಳೂರು (PACE) ಫುಟ್‌ಬಾಲ್ ತಂಡ ಹೊರಹೊಮ್ಮಿದೆ.

ಈ ಪಂದ್ಯಾಟವು 13 ಮತ್ತು 14 ಜೂನ್ 2024 ರಂದು ಮಂಡ್ಯದ PES ಕಾಲೇಜಿನಲ್ಲಿ ನಡೆಯಿತು. ಅಂತಿಮ ಪಂದ್ಯದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಕಾಲೇಜು ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ತನ್ನದಾಗಿಸಿ ಕೊಂಡಿದೆ.

ಮಂಗಳೂರು ವಿಭಾಗ ಮಟ್ಟದಲ್ಲಿ ಕಳೆದ ಸತತ ಮೂರು ವರ್ಷಗಳಿಂದ ಚಾಂಪಿಯನ್ ಆಗಿದ್ದ ಪಿ.ಎ. ಇಂಜಿನಿಯರಿಂಗ್ ಕಾಲೇಜ್ ಫುಟ್‌ಬಾಲ್ ತಂಡ ಈ ಬಾರಿ ರಾಜ್ಯ ಮಟ್ಟದಲ್ಲಿ ಸಾಧನೆಯು ತಂಡದ
ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಕ್ರೀಡೆಯ ಮೇಲಿನ ಉತ್ಸಾಹವನ್ನು ಎತ್ತಿ ತೋರಿಸುತ್ತದೆ. ಈ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಡೀನ್(ವಿದ್ಯಾರ್ಥಿ ವ್ಯವಹಾರ) ಇವರು ಪೇಸ್ ತಂಡಕ್ಕೆ, ತರಬೇತುದಾರ ಇಬ್ರಾಹಿಂ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಇಕ್ಬಾಲ್ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!