July 21, 2024

ಎಸ್ಕೆ ಎಸ್ಸೆ ಎಸ್ಸೆ ಎಫ್ ಅಝಾದ್ ನಗರ ಯೂನಿಟ್ ವತಿಯಿಂದ ಮಯ್ಯತ್ ಪರಿಪಾಲನೆ  ತರಬೇತಿ ಶಿಬಿರ

0

ಮುಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ನ ಇದರ ಅಧೀನಕ್ಕೊಳಪಟ್ಟ ಬದ್ರಿಯಾ ಮಸ್ಜಿದ್ (ರಿ) ಆಝಾದ್ ನಗರ ಇದರ ಅಂಗ ಸಂಸ್ಥೆಯಾದ ಎಸ್ಕೆ ಎಸ್ಸೆ ಎಸ್ಸೆ ಎಪ್ ಅಝಾದ್ ನಗರ ಯೂನಿಟ್ ವತಿಯಿಂದ   ಮಯ್ಯಿತ್ ಪರಿಪಾಲನೆ
   ತರಬೇತಿ ಶಿಬಿರ ದಿನಾಂಕ 13-06-2024 ಬುಧವಾರ  ಇಶಾಹ್ ನಮಾಝ್ ಬಳಿಕ   ಬದ್ರಿಯಾ ಮಸ್ಜಿದ್ (ರಿ) ಆಝಾದ್ ನಗರ ಇದರ ಸಭಾಂಗಣದಲ್ಲಿ ನಡೆಯಿತು.

ಮೂಲರಪಟ್ಣ ಕೇಂದ್ರ ಜುಮಾ ಮಸೀದಿ ಖತೀಬರಾದ ಬಹು! ಅಲ್ ಹಾಜ್ ಮೊಹಮ್ಮದ್ ಶೆರೀಫ್ ದಾರಿಮಿ ಅವರು ತರಬೇತಿ ನೀಡಿದರು.   ಶಿಬಿರದ ಉದ್ಘಾಟನೆಯನ್ನು ಬದ್ರಿಯಾ ಮಸ್ಜಿದ್ ಸದರ್ ಮುಅಲ್ಲಿಂ ಬಹು!ರಿಯಾಜ್ ದಾರಿಮಿ  ನೆರವೇರಿಸಿದರು.
ಶಿಬಿರದ ಅಧ್ಯಕ್ಷತೆಯನ್ನು ಎಸ್ಕೆ ಎಸ್ಸೆ ಎಸ್ಸೆ ಎಪ್ ಅಝಾದ್ ನಗರ ಯುನಿಟ್ ಅಧ್ಯಕ್ಷರಾದ ಜ! ಅಬ್ದುಲ್ ಜಬ್ಬಾರ್ ಜಬ್ಬಾರ್ ಎಂ ಪಿ ವಹಿಸಿದ್ದರು.


ಬದ್ರಿಯಾ ಮಸ್ಜಿದ್ (ರಿ)ಅಝಾದ್ ನಗರ ಇದರ ಗೌರವಾನ್ವಿತ ಅಧ್ಯಕ್ಷರಾದ ಇಂತಿಯಾಜ್ ಅರ್ಶದಿ, ಕಾರ್ಯದರ್ಶಿ ಸಜಿವುದ್ದೀನ್ ಎಂ ಎಸ್,  ಶಂಸುಲ್ ಉಲೂಂ ಸ್ವಲಾತ್ ಕಮಿಟಿ ಅಝಾದ್ ನಗರ ಇದರ ಗೌರವಾಧ್ಯಕ್ಷರಾದ ಜ! ಹಸನಬ್ಬ ಗುತ್ತು,ಅಬ್ದುಲ್ ಖಾದರ್ ಮುಸ್ಲಿಯಾರ್, ಖಲೀಲ್ ಇರ್ಫಾನಿ ,  ಎಸ್ಕೆ ಎಸ್ಸೆ ಎಸ್ಸೆ ಎಪ್ ಅಝಾದ್ ನಗರ ಯೂನಿಟ್ ಇದರ ಪ್ರಧಾನ ಕಾರ್ಯದರ್ಶಿ ಶಾರೂಕ್ ಎಂ ಬಿ, ಮದ್ರಸದ ಮಾಜಿ ಅಧ್ಯಕ್ಷರುಗಳು ಹಾಗೂ ಹಿರಿಯರಾದ ಎಮ್ ಇಬ್ರಾಹಿಂ,ಎಮ್ ಮೊಹಮ್ಮದ್ ಉಪಸ್ಥಿತರಿದ್ದರು . ಶಿಬಿರದಲ್ಲಿ ಹಲವು ಮಂದಿ ವಿದ್ಯಾರ್ಥಿ ಪೋಷಕರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!