ವಿಟ್ಲ: ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ರಜಿತ್ ಕುಮಾರ್ ಆಳ್ವ ಎರ್ಮೆನಿಲೆ ಆಯ್ಕೆ
ವಿಟ್ಲ: ಲಯನ್ಸ್ ಕ್ಲಬ್ ನ 2024/25ನೇ ಸಾಲಿನ ನೂತನ ಅಧ್ಯಕ್ಷರಾಗಿ ರಜಿತ್ ಕುಮಾರ್ ಆಳ್ವ ಎರ್ಮೆನಿಲೆ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಅರವಿಂದ ರೈ ಮೂರ್ಜೆಬೆಟ್ಟು, ಕೋಶಾಧಿಕಾರಿಯಾಗಿ ಮನೋಜ್ ರೈ ವಿಟ್ಲ ಆಯ್ಕೆಯಾಗಿರುತ್ತಾರೆ.
ಜೂ.15 ರಂದು ಸಂಜೆ ವಿಟ್ಲ ಲಯನ್ಸ್ ಸೇವಾ ಭವನ ಸಿಂಹಗಿರಿ ಒಕ್ಕೆತ್ತೂರು ಇಲ್ಲಿ ಪದಗ್ರಹಣ ನಡೆಯಲಿದ್ದು, ಪದಗ್ರಹಣ ಕಾರ್ಯಕ್ರಮವನ್ನು 317ಡಿ ಇದರ ಜಿಲ್ಲೆಯ ಉಪ ರಾಜ್ಯಪಾಲರಾದ ಕುಡುಪಿ ಅರವಿಂದ ಶೆಣೈ ಅವರು ನಡೆಸಲಿದ್ದಾರೆ.