ಬೈಕ್‌ಗೆ ಲಾರಿ ಢಿಕ್ಕಿ: ಪತ್ನಿ ಸ್ಥಳದಲ್ಲೇ ಸಾವು, ಪತಿಗೆ ಗಾಯ
ಚಿಕ್ಕೋಡಿ: ಪತಿಯೊಂದಿಗೆ ದೇವರ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಬೈಕ್‌ಗೆ ಲಾರಿ ಡಿಕ್ಕಿಯೊಡೆದ ಪರಿಣಾಮ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಕ್ರಾಸ್ ಬಳಿ ನಡೆದಿದೆ.
ಮೃತ ಮಹಿಳೆಯನ್ನು ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದ ರೇವತಿ ಬಸಗೌಡ ಅರಳಿಕಟ್ಟಿ (25), ಗಾಯಾಳು ಪತಿ ಬಸಗೌಡ ಶಿವಲಿಂಗ ಅರಳಿಕಟ್ಟಿ (35) ಎಂದು ಗುರುತಿಸಲಾಗಿದೆ.
ಪತಿ-ಪತ್ನಿ ಇಬ್ಬರೂ ಚಿಕ್ಕೋಡಿ ತಾಲೂಕಿನ ಯಡೂರಿಗೆ ದೇವರ ದರ್ಶನಕ್ಕೆ ತೆರಳಿದ್ದರು.