ಉಳ್ಳಾಲ: ಗ್ಲೋಬಲ್ ಮಾರುಕಟ್ಟೆಯ ಘಟನಾ ಸ್ಥಳಕ್ಕೆ ಯು.ಟಿ.ಖಾದರ್ ಭೇಟಿ
ಉಳ್ಳಾಲ: ಉಳ್ಳಾಲದ ಇಲ್ಲಿನ ಗ್ಲೋಬಲ್ ಮಾರುಕಟ್ಟೆಯಲ್ಲಿ ನಡೆದ ಆಕಸ್ಮಿಕ ಅಗ್ನಿ ಅನಾಹುತದಲ್ಲಿ ಹಲವಾರು ಅಂಗಡಿಗಳ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿರುವ ಘಟನೆ ಸೋಮವಾರ ಮುಂಜಾನೆ 4 ಗಂಟೆ ವೇಳೆಗೆ ನಡೆದಿದೆ.
ಸ್ಥಳಕ್ಕೆ ಭೇಟಿ ನೀಡಿದ ಸ್ಪೀಕರ್ ಯು.ಟಿ ಖಾದರ್ ಪರಿಶೀಲನೆ ನಡೆಸಿದರು.
ಈ ಅಗ್ನಿ ಅವಘಡದಲ್ಲಿ ಮಾರುಕಟ್ಟೆ ಮೇಲೆ ಹಾಕಲಾಗಿದ್ದ ಶೀಟು, ಅಂಗಡಿಗಳಲ್ಲಿ ಆಹಾರ ಸಾಮಗ್ರಿ ಶೇಖರಣೆ ಮಾಡಿಕೊಡುವ ಕಪಾಟು, ಟೇಬಲ್ ಫ್ರೂಟ್ಸ್, ನಗದು ಸಹಿತ ಇತರ ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ. ಇದರಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.