ಗಾರ್ಮೆಂಟ್ಸ್’ಗೆ ಹೊರಟ್ಟಿದ್ದ ಮಹಿಳೆ ನಾಪತ್ತೆ
ಮಂಡ್ಯ ಜಿಲ್ಲೆಯ ಮದ್ದೂರಿನ ಗೆಜ್ಜಲಗೆರೆ ಗಾರ್ಮೆಂಟ್ಸ್’ಗೆ ಹೊರಟ್ಟಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಮಂಡ್ಯ ತಾಲ್ಲೂಕಿನ ಹೆಚ್.ಕೋಡಿಹಳ್ಳಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ವೀಣಾ ಕೆ.ಎಸ್ (28) ನಾಪತ್ತೆಯಾದವರು, ಕಳೆದ ಮೇ.29ರಂದು ಗೆಜ್ಜಲಗೆರೆ ಗಾರ್ಮೆಂಟ್ಸ್’ಗೆ ತೆರಳಿದ್ದ ಪತ್ನಿ ಸಂಜೆ ವಾಪಸ್ ಮನೆಗೆ ಬಂದಿಲ್ಲ.
ಬಂಧು ಮಿತ್ರರ ಮನೆಯಲ್ಲಿ ಹುಡುಕಿದ ಬಳಿಕ ತಡವಾಗಿ, ಆಕೆಯ ಪತಿ ಮಂಡ್ಯ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಭಾನುವಾರ (ಜೂ.9) ಮಧ್ಯಾಹ್ನ 3.30 ಗಂಟೆಯಲ್ಲಿ ದೂರು ದಾಖಲಿಸಿದ್ದಾರೆ.





