Whatsappನಲ್ಲಿ ರಾಜೀನಾಮೆ ಕೇಳಿದರೆ ಕೊಡಲು ಆಗಲ್ಲ: ಹರೀಶ್ ಕುಮಾರ್
ಮಂಗಳೂರು: ವಾಟ್ಸಪ್ ನಲ್ಲಿ ರಾಜೀನಾಮೆ ಕೇಳಿದರೆ ಕೊಡಲು ಆಗಲ್ಲ ಎಂದು ಎಂದು ದ.ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ವಾಟ್ಸಪ್ ಯೂನಿವರ್ಸಿಟಿಯ ಸ್ಟೂಡೆಂಟ್ ಅಲ್ಲ, ನಾನು ಕಾಂಗ್ರೆಸ್ ಯೂನಿವರ್ಸಿಟಿಯ ಸ್ಟೂಡೆಂಟ್. ನನ್ನನ್ನು ಜಿಲ್ಲಾಧ್ಯಕ್ಷ ಮಾಡಲು ಅಂದಿನ 7 ಶಾಸಕರು ಪತ್ರ ಕೊಟ್ಟಿದ್ದರು. ನಾನು ಕಾಂಗ್ರೆಸ್ ಕಾರ್ಯಕರ್ತ, ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿದ್ದೇನೆ ಎಂದು ಎಂದು ದ.ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ನನ್ನನ್ನು ಪಕ್ಷ ನೇಮಿಸಿದೆ, ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಪಕ್ಷಕ್ಕೆ ಗೊತ್ತಿದೆ. ಜನಾರ್ದನ ಪೂಜಾರಿಯವರು ಐದು ಸಲ ಸೋತಾಗ, ಮೊಯಿಲಿ ಅವರು ಎರಡು ಸಲ ಸೋತಾಗ ಯಾರೂ ರಾಜೀನಾಮೆ ನೀಡರಲಿಲ್ಲ. ಯಾರೋ ರಾಜೀನಾಮೆ ಕೇಳಿದರು ಅಂತ ರಾಜೀನಾಮೆ ಕೊಡಲು ಆಗಲ್ಲ ಎಂದು ದ.ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ವಾಟ್ಸಪ್‌ನಲ್ಲಿ ರಾಜೀನಾಮೆ ಕೇಳಿದರೆ ಕೊಡಲ್ಲ. ಪಕ್ಷ ತೀರ್ಮಾನ ಮಾಡಿದರೆ ಮಾತ್ರ ರಾಜೀನಾಮೆ. ಜಿಲ್ಲೆಯ ಯಾವ ಕಾಂಗ್ರೆಸ್ ನಾಯಕರು ನನ್ನ ರಾಜೀನಾಮೆ ಕೇಳಿಲ್ಲ. ಪದ್ಮರಾಜ್ ಪೂಜಾರಿ, ರಮಾನಾಥ ರೈ ರಾಜೀನಾಮೆ ಕೇಳಿಲ್ಲ, ಯಾರೋ ವಾಟ್ಸಪ್‌ನಲ್ಲಿ ರಾಜೀನಾಮೆ ಕೇಳಿದರೆ ರಾಜೀನಾಮೆ ಕೊಡಲು ಆಗಲ್ಲ ಎಂದು ಹೇಳಿದ್ದಾರೆ




