ವಿಟ್ಲ: ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ನೂತನ ಅಧ್ಯಕ್ಷರಾಗಿ ಇಕ್ಬಾಲ್ ಶೀತಲ್:
ಕಾರ್ಯದರ್ಶಿಯಾಗಿ ಹಮೀದ್ ಬದ್ರಿಯಾ ಆಯ್ಕೆ
ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಇಕ್ಬಾಲ್ ಶೀತಲ್ ಆಯ್ಕೆಯಾಗಿದ್ದಾರೆ.
ನ್ಯಾಯವಾದಿ ಅಬೂಬಕ್ಕರ್ ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಬ್ದುಲ್ಲ ಕುಂಞ, ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಬದ್ರಿಯಾ, ಜತೆ ಕಾರ್ಯದರ್ಶಿಯಾಗಿ ಹಮೀದ್ ಕುರುಂಬಳ, ಕೋಶಾಧಿಕಾರಿ ಶರೀಫ್ ಪೊನ್ನೋಟ್ಟು, ಲೆಕ್ಕಪರಿಶೋಧಕರಾಗಿ ಇಸ್ಮಾಯಿಲ್ ಪರ್ತಿಪ್ಪಾಡಿ, ರಶೀದ್ ವಿ.ಎ ಅವರನ್ನು ಆಯ್ಕೆ ಮಾಡಲಾಯಿತು.





