ದಕ್ಷಿಣ ಕನ್ನಡ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿಯೇ ಲೀಡ್
ಮಂಗಳೂರು: ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜಕೀಯ ಚರ್ಚೆ ಆರಂಭವಾಗಿದೆ. ಅದಲ್ಲದೆ ಮತಗಳ ಅಂತರದ ಲೆಕ್ಕಚಾರವೂ ಶುರುವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲಾ ವ್ಯಾಪ್ತಿಗೊಳಪಟ್ಟ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7ರಲ್ಲೂ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮತ ಗಳಿಕೆಯಲ್ಲಿ ಲೀಡ್ ಸಾಧಿಸಿದ್ದಾರೆ.
ಸುಳ್ಯದಲ್ಲಿ ಬ್ರಿಜೇಶ್ ಅತ್ಯಧಿಕ 39,147 ಮತಗಳ ಮುನ್ನಡೆ ಪಡೆದಿದ್ದಾರೆ. ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಆರ್.ಪದ್ಮರಾಜ್ ರಿಗೆ 33,062 ಮುನ್ನಡೆ ದೊರೆತಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚೌಟರಿಗೆ 28,690 ಮತಗಳ ಮುನ್ನಡೆ ಸಿಕ್ಕಿದೆ.




