June 11, 2026

ಜಿ. ಎಚ್.ಎಮ್ (ರಿ) ಫೌಂಡೇಶನ್ ಮೂಲರಪಟ್ಣ ಇದರ ವತಿಯಿಂದ ಎಲ್.ಕೆ.ಜಿ ಯು.ಕೆ.ಜಿ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮ

0
IMG-20240605-WA0003.jpg

ಬಂಟ್ವಾಳ: ಜಿ. ಎಚ್.ಎಮ್ (ರಿ) ಫೌಂಡೇಶನ್ ಮೂಲರಪಟ್ಣ ಇದರ ವತಿಯಿಂದ ನಡೆಸುತ್ತಿರುವ ಎಲ್.ಕೆ.ಜಿ ಯು.ಕೆ.ಜಿ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮವು ದಿನಾಂಕ 03-06-2024 ರ ಸೋಮವಾರ ಬೆಳಗ್ಗೆ 10 ಗಂಟೆಗೆ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮೂಲರಪಟ್ಣ ಇಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ. ಎಚ್.ಎಮ್ (ರಿ) ಫೌಂಡೇಶನ್ ಮೂಲರಪಟ್ಣ ಇದರ ಗೌರವಾನ್ವಿತ ಅಧ್ಯಕ್ಷರಾದ ಜ! ಮೊಹಮ್ಮದ್ ಶಾಲಿ ವಹಿಸಿದ್ದರು. ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಜ! ಹಂಝ ಗುತ್ತು ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್ ಎಮ್ ಎಸ್ ಡಾಟಾ ಎಂಟ್ರಿ ತಂಡದ ಮುಖ್ಯಸ್ಥ ಮೊಹಮ್ಮದ್ ಕಬೀರ್ ಎಮ್ ಪಿ,ತೌಹೀದ್ ಎಮ್ ಬಿ ಮುನೀರ್ ಅಝಾದ್ ನಗರ ಹಿರಿಯರಾದ ಅಬ್ದುಲ್ ಜಬ್ಬಾರ್ ಎಮ್ ಪಿ ಮುಂತಾದವರು ಉಪಸ್ಥಿತರಿದ್ದರು.

ಎಲ್.ಕೆ.ಜಿ ಯು.ಕೆ.ಜಿ ತರಗತಿ ಶಿಕ್ಷಕಿಯರಾದ
ಕು! ಶಾಹಿಫ ಅತಿಥಿಗಳನ್ನು ಸ್ವಾಗತಿಸಿದರು. ಕು! ಸುರೈನ ಕಾರ್ಯಕ್ರಮ ನಿರೂಪಿಸಿದರು. ಬಂದ ಅತಿಥಿಗಳೆಲ್ಲರೂ‌ ಪುಟಾಣಿ ಮಕ್ಕಳನ್ನು ತರಗತಿಗೆ ಆತ್ಮೀಯವಾಗಿ ಸ್ವಾಗತಿಸಿದರು. ವಿಧ್ಯಾರ್ಥಿ ಪೋಷಕರೆಲ್ಲರೂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!