ವಿಟ್ಲ: SSLC ಪರೀಕ್ಷೆ ಮರು ಮೌಲ್ಯ ಮಾಪನ: ಜೇಸಿ ಶಾಲಾ ವಿದ್ಯಾರ್ಥಿನಿಗೆ ಹೆಚ್ಚುವರಿ ಅಂಕ
2024ನೇ ಸಾಲಿನ SSLC ಪಬ್ಲಿಕ್ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ ಕುಮಾರಿ ಮನೋನ್ಮಯಿ.ಕೆ ಸಮಾಜ ವಿಜ್ಞಾನ ವಿಷಯದಲ್ಲಿ 2ಹೆಚ್ಚುವರಿ ಅಂಕಗಳನ್ನು ಪಡೆಯುವ ಮೂಲಕ ಒಟ್ಟು 622ಅಂಕಗಳನ್ನು ಪಡೆದು ರಾಜ್ಯಕ್ಕೆ 4ನೇ ಸ್ಥಾನವನ್ನು ಗಳಿಸಿಕೊಂಡಿರುತ್ತಾರೆ. ಇವರಿಗೆ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ, ಶಿಕ್ಷಕ- ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.






