ಮನೆಯ ಮೇಲ್ಛಾವಣಿ ಕುಸಿದು ಅಕ್ಕ, ತಮ್ಮ ಸಾವು

ಬಾಗಲಕೋಟೆ: ಮನೆಯ ಮೇಲ್ಛಾವಣಿ ಕುಸಿದು ಅಕ್ಕ, ತಮ್ಮ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಘಟನೆಯಲ್ಲಿ ಅಪ್ರಾಪ್ತರಾದ ಗೀತಾ ಈಶ್ವರಯ್ಯ ಆದಾಪುರಮಠ(14) ಹಾಗೂ ಆಕೆಯ ಸಹೋದರ ರುದ್ರಯ್ಯ(10) ಸಾವನ್ನಪ್ಪಿದ್ದಾರೆ.
ವಯೋವೃದ್ಧ ಅಜ್ಜಿ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಂದೆ, ತಾಯಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳು ಹಾಗೂ ಅಜ್ಜಿ ಮನೆಯಲ್ಲಿದ್ದರು ಎನ್ನಲಾಗಿದೆ.