January 15, 2025

ವಿಟ್ಲ ಜೇಸಿಶಾಲೆ: ಶಾಲಾರಂಭ ಹಾಗೂ ಸೌರಶಕ್ತಿ ಘಟಕದ ಉದ್ಘಾಟನೆ

0

ನೈಸರ್ಗಿಕ ಸಂಪತ್ತಿನ ಪೂರ್ಣ ಬಳಕೆಯೂ ದೇಶದ ಅಭಿವೃದ್ಧಿಗೆ ಪೂರಕ ಕೊಡುಗೆಯಾಗುತ್ತದೆ”, ಉಪಯೋಗಿಸುವ ಪ್ರಯತ್ನ ನಮ್ಮದಾಗಬೇಕೆಂದು ವಿಠ್ಠಲ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್ ಎನ್ ಕೂಡೂರುರವರು ಸೌರಶಕ್ತಿ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ  ಮಾತನಾಡುತ್ತಾ  ಸಂಸ್ಥೆ ಸೋಲಾರ್ ಶಕ್ತಿಯನ್ನು ಅಳವಡಿಸಿಕೊಂಡಿದೆ ಎಂದರು.

ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಸೋಲಾರ್ ರೂಫ್ ಟಾಪ್ ಪ್ಲಾಂಟ್ ನ ಉದ್ಘಾಟನಾ ಕಾರ್ಯಕ್ರಮದ ಉದ್ಘಾಟನೆಯನ್ನು  ವಿಟ್ಲ ಶಾಖೆಯ ಮೆಸ್ಕಾಂ ಸಹಾಯಕ ಇಂಜಿನಿಯರ್ ಸತೀಶ್ ಸಪಲ್ಯ ನೆರವೇರಿಸಿ ಶುಭ ಹಾರೈಸಿದರು.

 

 


ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಕಿರ್ಲೋಸ್ಕರ್ ಸೋಲಾರ್ ನ ಉಪ ವ್ಯವಸ್ಥಾಪಕರಾದ ಶಿವಕುಮಾರ್ ಎಂ ನೂತನ ಯೋಜನೆಯ ಬಗ್ಗೆ ವಿವರಿಸಿದರು.ಇನ್ನೋರ್ವ ಅತಿಥಿಗಳಾದ ಕರ್ನಾಟಕ ಬ್ಯಾಂಕ್ ಪುತ್ತೂರು ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಶ್ರೀಹರಿ.ಪಿ ಯಶಸ್ವಿ ಯೋಜನೆಗೆ ಶುಭ ಹಾರೈಸಿದರು. ಶಾಲಾ ಪ್ರಾರಂಭೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತ ಹೊಸ ದಾಖಲಾತಿ ಹೊಂದಿದ ವಿದ್ಯಾರ್ಥಿಗಳನ್ನು ಚಂಡೆ ಹಾಗೂ ಮೆರವಣಿಗೆಯ ಮೂಲಕ ಕರೆತರಲಾಯಿತು.  ಪ್ರಾಂಶುಪಾಲರು ಅವಕಾಶಗಳನ್ನು ಸದುಪಯೋಗಿಸಿಕೊಳ್ಳುವುದು ಒಂದು ಕಲೆ ವಿದ್ಯಾರ್ಥಿಗಳೇ ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನಾಡಿದರು.


ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಶ್ರೀಧರ ಶೆಟ್ಟಿ, ಶ್ರೀ ಪ್ರಕಾಶ್ ಕುಕ್ಕಿಲ, ಹಸನ್ ವಿಟ್ಲ,  ಪ್ರಭಾಕರ್ ಶೆಟ್ಟಿ,  ವಿಜಯ ಪಾಯಸ್, ಪ್ರಾಂಶುಪಾಲ ಜಯರಾಮ್ ,    ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ರಾಧಾಕೃಷ್ಣ ಎ ವಂದನಾರ್ಪಣೆಗೈದರು. ಸಹ ಶಿಕ್ಷಕಿಯರಾದ ಹೇಮಲತಾ ಹಾಗೂ ಸವಿತಾ  ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಧನಲಕ್ಷ್ಮಿ  ಪ್ರಾರ್ಥನೆಗೈದರು.

Leave a Reply

Your email address will not be published. Required fields are marked *

error: Content is protected !!