May 6, 2026

ಬಂಟ್ವಾಳ: ಜೀಪು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ: ಸವಾರ ಗಂಭೀರ

0
image_editor_output_image-1478600189-1715867935255

ಬಂಟ್ವಾಳ: ಜೀಪೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದ್ದು , ಗಾಯಗೊಂಡ ಸ್ಕೂಟರ್ ಸವಾರನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಣಂದೂರು ನಿವಾಸಿ ಮಹಮ್ಮದ್ ಅರ್ಫಾಸ್ ಗಾಯಗೊಂಡ ಯುವಕನಾಗಿದ್ದಾನೆ.
ಜೀಪ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ.

ಪುಂಜಾಲಕಟ್ಟೆ ಠಾಣೆಯ ಸಮೀಪವಿರುವ ನಂದಗೋಕುಲ ಮುಂಭಾಗದಲ್ಲಿ ಬಿಸಿರೋಡು ಬೆಳ್ತಂಗಡಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಹಾಲ್ ಸಮೀಪ ರಸ್ತೆಯಲ್ಲಿ ನಿಲ್ಲಿಸಲಾಗಿರುವ ಜೀಪನ್ನು ಚಾಲಕ ವಸಂತ ಶೆಟ್ಟಿ ಎಂಬವರು ಅಜಾಗರೂಕತೆಯಿಂದ ಒಮ್ಮೆಲೆ ಬಂಟ್ವಾಳ ಕಡೆಗೆ ತಿರುಗಿಸಿದಾಗ ಬಿಸಿರೋಡಿನ ಕಡೆಯಿಂದ ಬರುತ್ತಿದ್ದ ಸ್ಕೂಟರ್ ಸವಾರ ಅರ್ಫಾಸ್ ಅವರಿಗೆ ಡಿಕ್ಕಿಯಾಗಿದೆ.
ಕೂಡಲೇ ಸ್ಥಳೀಯರು ಗಾಯಗೊಂಡ ಅರ್ಫಾಸ್ ಅವರನ್ನು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಕಾರಣಕ್ಕಾಗಿ ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೀಪ್ ಚಾಲಕನ ನಿರ್ಲಕ್ಷ್ಯ ತನದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು, ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಈತನ ಸಂಬಂಧಿಕ ರಶೀದ್ ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಎಸ್.ಐ.ಉದಯರವಿ‌ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!