May 6, 2026

ಸುಬ್ರಹ್ಮಣ್ಯ: ಭಾರೀ ಮಳೆಗಾಳಿ- ಮರ ಬಿದ್ದು ಮಹಿಳೆ ಮೃತ್ಯು: ತೋಟದಲ್ಲಿ ಕಟ್ಟಿದ್ದ ದನ ಬಿಡಿಸಲು ಹೋದಾಗ ಘಟನೆ

0
image_editor_output_image274144351-1715791096812

ಸುಬ್ರಹ್ಮಣ್ಯ: ಗಾಳಿ ಮಳೆಯಿಂದ ಕರುವನ್ನು ರಕ್ಷಿಸಲು ಹೋದ ಮಹಿಳೆಯ ಮೇಲೆ ಮರ ಉರುಳಿ ಬಿದ್ದು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಎಂಬಲ್ಲಿ ಬುಧವಾರ ನಡೆದಿದೆ.

ಕುಲ್ಕುಂದ ನಿವಾಸಿ ಮಿನಾಕ್ಷಿ (67) ಮೃತ ಮಹಿಳೆ.

ಇಂದು ಸುಬ್ರಹ್ಮಣ್ಯ ಪರಿಸರದಲ್ಲಿ ವಿಪರೀತ ಗಾಳಿ , ಮಳೆ ಸುರಿದಿದ್ದು ಈ ವೇಳೆ ತೋಟದಲ್ಲಿ ಕಟ್ಟಿದ್ದ ಕರುವನ್ನು ಬಿಡಿಸಲು ಮೀನಾಕ್ಷಿಯವರು ತೋಟಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ವಿಪರೀತವಾಗಿ ಬೀಸಿದ ಗಾಳಿಗೆ ತೋಟದಲ್ಲಿದ್ದ ಮರ ಮೀನಾಕ್ಷಿಯವರ ಮೇಲೆ ಬಿದ್ದಿದೆ. ಮರ ಉರುಳಿ ಬಿದ್ದ ರಭಸಕ್ಕೆ ಮಹಿಳೆಯ ದೇಹ ಛಿದ್ರವಾಗಿದೆ

ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿ, ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!