ಕಾಸರಗೋಡು: ಚಿನ್ನದ ಸರ ಕಸಿದ ಪ್ರಕರಣ, ಬಂಟ್ವಾಳದ ನಿವಾಸಿಯ ಬಂಧನ
ಕಾಸರಗೋಡು: ಬೈಕ್ ನಲ್ಲಿ ಬಂದು ಕೃಷಿಕ ರೋರ್ವರ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ.
ಬಂಟ್ವಾಳ ಬಿ. ಸಿ ರೋಡ್ ಶಾಂತಿಯಂಗಡಿಯ ಮುಹಮ್ಮದಾಲಿ ಯಾನೆ ಅಝರ್ ( 33) ಬಂಧಿತ ಆರೋಪಿ.
ಇನ್ನೋರ್ವ ಆರೋಪಿ ಉಳ್ಳಾಲ ಮೂಲದ ಮುಹಮ್ಮದ್ ಸುಹೈಲ್ ನನ್ನು ನಾಲ್ಕು ದಿನಗಳ ಹಿಂದೆ ಬಂಧಿಸಲಾಗಿತ್ತು .ಕುಂಬಳೆ ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಶಾಂತಿಯಂಗಡಿಯ ಮನೆಯಿಂದ ಅಝರ್ ನನ್ನು ಬಂಧಿಸಲಾಗಿದೆ.
ಈತನ ವಿರುದ್ಧ ಕುಂಬಳೆ , ಬದಿಯಡ್ಕ , ನೀಲೇಶ್ವರ ಹಾಗೂ ಇನ್ನಿತರ ಕಡೆಗಳಲ್ಲಿ ಸರ ಕಸಿದ , ಕಳವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.




