May 6, 2026

ಜಿ.ಎಚ್.ಎಮ್ ಫೌಂಡೇಶನ್ (ರಿ) ಮೂಲರಪಟ್ಣ ಇದರ ವತಿಯಿಂದ  ಸದಸ್ಯರ ಸಭೆ ಹಾಗೂ  ಹಜ್ ಯಾತ್ರಿಗಳಿಗೆ  ಸನ್ಮಾನ ಕಾರ್ಯಕ್ರಮ

0
image_editor_output_image1133577744-1715706950277

ಜಿ.ಎಚ್.ಎಮ್ ಫೌಂಡೇಶನ್ (ರಿ) ವತಿಯಿಂದ  ಸದಸ್ಯರ ಸಭೆಯು 13-05-2024  ಸೋಮವಾರ ಬೆಳಗ್ಗೆ 7.30 ಕ್ಕೆ ಸರಿಯಾಗಿ ಸಂಸ್ಥೆಯ ಪ್ರಮುಖ ಕಛೇರಿಯಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಜಿ.ಎಚ್.ಎಮ್ ಫೌಂಡೇಶನ್ (ರಿ) ಗೌರವಾನ್ವಿತ ಅಧ್ಯಕ್ಷರು ಜ! ಮೊಹಮ್ಮದ್ ಶಾಲಿ ವಹಿಸಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್ ಎಮ್ ಎಸ್ ಅತಿಥಿಗಳನ್ನು ಹಾಗೂ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು.ಪ್ರಸ್ತುತ ಈ ಸಂದರ್ಭದಲ್ಲಿ ಜಿ.ಎಚ್.ಎಮ್ ಫೌಂಡೇಶನ್ (ರಿ) ಇದರ ಉಪಾಧ್ಯಕ್ಷರಾದ ಜ!ಅಶ್ರಫ್ ವಾರಟೀಲು, ಗಲ್ಪ್ ಟೀಮ್ ಪ್ರಮುಖರಾದ ಅಝೀಝ್ ಬೆಳ್ಳೂರು ,ಸಲಹೆಗಾರರಾದ ಜ! ಜಕರಿಯಾ ಫರ್ವೀಝ್ ಹಾಗೂ ಎಮ್ ಬಿ ಅಶ್ರಫ್, ಎಕ್ಸಿಕ್ಯೂಟಿವ್ ಹೆಡ್ ಹಂಝ ಗುತ್ತು ಹಾಗೂ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.


ಪ್ರಸ್ತುತ ಸಂದರ್ಭದಲ್ಲಿ ದಿನಾಂಕ 15 ರಂದು ಪವಿತ್ರ ಹಜ್ ಯಾತ್ರೆಗೆ ಹೊರಡಲಿರುವ ಮೂಲರಪಟ್ಣ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರೂ ಹಾಗೂ ಜಿ.ಎಚ್.ಎಮ್ ಫೌಂಡೇಶನ್ (ರಿ) ಇದರ ಗೌರವ ಸಲಹೆಗಾರರಾದ ಜ! ಎಮ್ ಬಿ ಅಶ್ರಫ್ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!