ಬೆಳ್ತಂಗಡಿ: ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಮಿನಿ ಬಸ್, 17 ಮಂದಿಗೆ ಗಾಯ, ತಪ್ಪಿದ ಭಾರೀ ಅನಾಹುತ
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಘಟನೆ ನಡೆದಿದೆ.
ಘಟನೆಯು ರವಿವಾರ ಮಂಗಳೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ವ್ಯಾಪ್ತಿಯ ಚಿಬಿದ್ರೆಯ ಕಾಪು ಚಡಾವು ಎಂಬಲ್ಲಿ ನಡೆದಿದ್ದು, 17 ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಚಾರ್ಮಾಡಿ ಘಾಟ್ ಮಾರ್ಗದ ಮೂಲಕ ಮಂಗಳೂರಿಗೆ ಆಗಮಿಸುತ್ತಿದ್ದ ಮಿನಿ ಬಸ್ ಅಪಘಾತವಾಗಿದೆ.




