May 6, 2026

ಬೈಂದೂರು: ಹಿತ್ತಾಳೆ ರಿಂಗ್ ಕಳ್ಳತನ, ಆರೋಪಿಯ ಬಂಧನ

0
image_editor_output_image-1246434862-1715592866418.jpg

ಬೈಂದೂರು ಠಾಣಾ ವ್ಯಾಪ್ತಿಯ ಕರ್ಕಿ ಕಳಿ ಎಡ ಮಾವಿನ ಹೊಳೆ ಸಮೀಪ ನಿಲ್ಲಿಸಿದ್ದ ದೋಣಿಯಲ್ಲಿರುವ ಬಲೆಯ ಹಗ್ಗವನ್ನು ತುಂಡರಿಸಿ 95 ಹಿತ್ತಾಳೆ ರಿಂಗ್ ಗಳನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಬೈಂದೂರು ಠಾಣ ಪಿಎಸ್ಐ ಮತ್ತು ತಂಡ ಯಶಸ್ವಿಯಾಗಿದೆ.

ರಾಣಿ ಬಲೆ ದೋಣಿಯ ಸುಮಾರು ಒಂದು‌ಲಕ್ಷ ಮೌಲ್ಯದ ಬಲೆಯನ್ನು ಮಾರ್ಚ್ 16 ರಂದು‌ ಕಳ್ಳರು ಕಳ್ಳತನ ಮಾಡಿದ್ದರು. ಇದೀಗ ಪೊಲೀಸರು ಆರೋಪಿ. ಮಹೇಶ್ ಖಾರ್ವಿ (30 ವರ್ಷ)ಯನ್ನು ಬಂಧಿಸಿ 95 ರಿಂಗ್ ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!