March 17, 2026

ಮಡಿಕೇರಿ: ಬಾಲಕಿಯನ್ನು ಕೊಂದು ರುಂಡದ ಸಮೇತ ಪರಾರಿಯಾಗಿದ್ದ ಆರೋಪಿಯ ಬಂಧನ

0
image_editor_output_image1664665194-1715395564570

ಮಡಿಕೇರಿ: ಬಾಲಕಿಯನ್ನು ಕೊಂದು ರುಂಡದ ಸಮೇತ ಪರಾರಿಯಾಗಿದ್ದ ಆರೋಪಿ ಸೋಮವಾರಪೇಟೆ ತಾಲ್ಲೂಕಿನ ಹಮ್ಮಿಯಾಳ ಗ್ರಾಮದ ಪ್ರಕಾಶ್‌ನನ್ನು (33) ಶನಿವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಆದರೆ ಬಾಲಕಿಯ ರುಂಡ ಪತ್ತೆಯಾಗಿಲ್ಲ.

ಈತನಿಗಾಗಿ ಹಗಲು ರಾತ್ರಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದೆವು. ಈ ವೇಳೆ ಬೆಳಿಗ್ಗೆ ಗ್ರಾಮದ ಸಮೀಪ ಕಾಡಿನಲ್ಲಿ ಈತ ಅವಿತುಕೊಂಡಿರುವ ಕುರಿತ ಮಾಹಿತಿ ಲಭಿಸಿತು. ಕೂಡಲೇ ಆತನನ್ನು ಬಂಧಿಸಲಾಯಿತು. ಇನ್ನು ಬಾಲಕಿಯ ರುಂಡದ ಕುರಿತು ಇನ್ನಷ್ಟೇ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿರುವುದು‌ ನಿಜ. ಆದರೆ ಬಾಲಕಿಯ ರುಂಡ ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!