ಕಾಸರಗೋಡು: ಎಎಸ್ಸೈ ವಿಷ ಸೇವಿಸಿ ಆತ್ಮಹತ್ಯೆ
ಕಾಸರಗೋಡು: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿಆಸ್ಪತ್ರೆಗೆ ದಾಖಲಿಸಲಾಗಿದ್ದ ಎ ಎಸ್ ಐ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಂಜೆ ಮೃತಪಟ್ಟಿದ್ದಾರೆ.
ಬೇಡಡ್ಕ ಠಾಣಾ ಎ ಎಸ್ ಐ ರಾಜಾಪುರ ಕೋಲಚ್ಚಿಲ್ ನ ವಿಜಯನ್ (50) ಮೃತಪಟ್ಟವರು. ಎರ್ನಾಕುಲಂ ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯನ್ ಶನಿವಾರ ಸಂಜೆ ಮೃತ ಪಟ್ಟರು.
ಏಪ್ರಿಲ್ ೨೯ ರಂದು ಮಧ್ಯಾಹ್ನ ಬೇಡಡ್ಕ ಪೊಲೀಸ್ ಠಾಣೆ ಯ ಸಮೀಪದ ವಸತಿ ಗ್ರಹದಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿಜಯನ್ ರವರನ್ನು ಕಾಸರಗೋಡು ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಿತಿ ಗಂಭೀರ ವಾದುದರಿಂದ ಬುಧವಾರ ಎರ್ನಾಕುಲಂ ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.




