March 17, 2026

ಕಾರವಾರ: ಗಂಡನ ಮೇಲಿನ ಸಿಟ್ಟಿಗೆ ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ

0
image_editor_output_image1345289316-1714897544947.jpg

ಕಾರವಾರ: ಪಾಪಿ ತಾಯಿಯೊಬ್ಬಳು ತನ್ನ ಗಂಡನ ಮೇಲಿನ ಸಿಟ್ಟಿಗೆ 6 ವರ್ಷದ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ.

ಸಾವಿತ್ರಿ ನಾಲೆಗೆ ಎಸೆದ ಪಾಪಿ ತಾಯಿಯಾಗಿದ್ದು, ವಿನೋದ್ (6) ಮೊಸಳೆ ಬಾಯಿಗೆ ಸಿಲುಕಿ ಮೃತಪಟ್ಟಿದ್ದಾನೆ.

ಗಂಡ ರವಿಕುಮಾರ್ ಮೇಲಿನ ಕ್ಷುಲ್ಲಕ ಕಾರಣಕ್ಕೆ ಕೋಪಿಸಿಕೊಂಡು ಜಗಳ ತೆಗೆದಿದ್ದ ಸಾವಿತ್ರಿ ಕೋಪದಲ್ಲಿ ಮಗುವನ್ನು ಮನೆಯ ಬಳಿ ಇದ್ದ ಮೊಸಳೆಗಳಿದ್ದ ನಾಲೆಗೆ ಎಸೆದಿದ್ದಾಳೆ. ನಂತರ ಪಶ್ಚಾತ್ತಾಪದಿಂದ ತನ್ನ ತಪ್ಪಿನ ಅರಿವಾಗಿ ತಾನು ಮಾಡಿದ ಕೃತ್ಯವನ್ನು ತಿಳಿಸಿದ್ದಾಳೆ.

ನಂತರ ಬಾಲಕನಿಗಾಗಿ ಶೋಧ ನಡೆಸಿದ್ದು ಈ ವೇಳೆ ಮೊಸಳೆ ಬಾಯಲ್ಲಿ ಸಾವಿಗೀಡಾದ ಮಗುವಿನ ಶವ ಪತ್ತೆಯಾಗಿದೆ. ಈ ಸಂಬಂಧ ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!