March 17, 2026

ಪುತ್ತೂರು: ಮತಗಟ್ಟೆಯೊಳಗೆ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್: ಯುವಕನ ವಿರುದ್ಧ FIR ದಾಖಲು

0
image_editor_output_image-884026941-1714196775553.jpg

ಪುತ್ತೂರು: ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ.

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದುಬಂದಿದೆ.

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!